Jatayu Newspaper
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಬಿಗ್ ಶಾಕ್; ಜಾಮೀನು ಅರ್ಜಿ ವಜಾ ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಬಿಗ್ ಶಾಕ್; ಜಾಮೀನು ಅರ್ಜಿ ವಜಾ
Sunday, 27 Sep 2026 05:30 am
Jatayu Newspaper

Jatayu Newspaper

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯನ್ನು ಶನಿವಾರ ಕೋರ್ಟ್ ವಜಾಗೊಳಿಸಿದೆ.ಜಾಮೀನು ಕೋರಿ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು 59 ಸಿಸಿಎಚ್ ನ್ಯಾಯಾಧೀಶರಾದ ಸುಜಾತ ಎಂ ಸಂಬ್ರಾಣಿ ಅವರು ಇಂದು ವಜಾಗೊಳಿಸಿ ಅದೇಶ ಹೊರಡಿಸಿದ್ದಾರೆ.ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿದಿರುವುದನ್ನು ಪರಿಗಣಿಸುವಂತೆ ಪವಿತ್ರಾ ಗೌಡ ಪರ ಹಿರಿಯ ವಕೀಲ ಬಾಲನ್ ಹಾಗೂ ವಕೀಲ ನಾರಾಯಣಸ್ವಾಮಿ ವಾದ ಮಾಡಿದ್ದರು.

ಅಲ್ಲದೆ ಪವಿತ್ರಾ ಗೌಡ ಅವರು ಸಿಂಗಲ್ ಮದರ್ ಆಗಿದ್ದು, ಮಗಳ ಶಿಕ್ಷಣ, ಆರೋಗ್ಯ, ಮಗಳ ಭವಿಷ್ಯವನ್ನು ಪರಿಗಣಿಸಿ ಮಾನವೀಯ ನೆಲೆಯಲ್ಲಿ ಪವಿತ್ರಾ ಗೌಡಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು..ಮಾಫಿ ಸಾಕ್ಷಿ ತಡೆಯಲು ದರ್ಶನ್ ಹಲವು ಕಸರತ್ತು: ಪ್ರದೋಷ್ ಹೇಳಿಕೆ ದಾಖಲು ಮುಂದೂಡಿಕೆ ಕೋರಿ ಮತ್ತೊಂದು ಅರ್ಜಿ!.ಆದರೆ ಪವಿತ್ರಾ ಗೌಡ ಪರ ವಕೀಲರ ವಾದವನ್ನು ತಿರಸ್ಕರಿಸಿದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು, ಜಾಮೀನು ನಿರಾಕರಿಸಿದ್ದಾರೆ..Follow KannadaPrabha channel on WhatsApp  Subscribe to KannadaPrabha YouTube Channel and watch Videos   Download the KannadaPrabha News app to follow the latest news updates  Subscribe and Receive exclusive content and updates on your favorite topics

Source: https://www.kannadaprabha.com/karnataka/2026/Sep/26/bengaluru-court-rejects-pavithra-gowdas-bail-plea-in-renukaswamy-murder-case